ಸೋಮವಾರ, ಜುಲೈ 30, 2012

ಯಾರು ಸರಿ

ಅಬಲೆ ಮಹಿಳೆಯನ್ನು  ಹೊಡೆಯುವುದು ದುಶ್ಶಾಸನರೇ..
ತುಂಡು ಬಟ್ಟೆ ಧರಿಸಿ ಮದ್ಯ ಲಹರಿಯಲ್ಲಿ ಮುಳುಗಲು ಹೋದವರಾರು ದ್ರೌಪದಿಯರೇ..? 

ನಿಮ್ಮ ಸಹೋದರಿಯನ್ನು ಈ ಥರಾ ಎಳೆದಾಡಿದರೆ ಸಹಿಸುತೀರಾ ನೀಚರೇ
ಮಕ್ಕಳನ್ನು ಮದ್ಯ ಪಾರ್ಟಿಗೆ ಅರಿತು ಕಳುಹಿಸುವ ನಿನ್ನನ್ನು "ಅಮ್ಮ" ಎಂದು ಹೇಗೆ ಕರೆಯಲಿ ?


ಭಾನುವಾರ, ಜುಲೈ 22, 2012

ಗಾಜಿನ ಮನೆ


ಮರುಭೂಮಿಯ ಬಿಸಿಲಿಗೆ
ನಾ ಮನಸಲ್ಲೇ  ಕಟ್ಟಿದೆ
ಗಾಜಿನ ಮನೆ

ಕೆಣಕಿ ಕೆಡಬೇಡ ಸಖೀ 
ನಾನು ಅದೊರೊಳಗಿರುವ 
ಮಯಣದ ಜೀವ 


ಕರಗಿ ಹೋಗುವೆನು ಬಹು ಬೇಗ 
ಮರುಭೂಮಿ  ಬಿಸಿಲ 
ನಿನ್ನ ತೀಕ್ಷ್ಣ ಮಾತಿಗೆ  


ನನಗಾಗಬೇಕು ನಿನ್ನ 
ಕತ್ತಲ ಜೀವನಕ್ಕೆ   
ಮಯಣದ ದಾರಿ ದೀಪ 

ಬುಧವಾರ, ಜುಲೈ 11, 2012

ಹೇಗೆ ಮರೆಯಲಿ

ಹೇಗೆ ಮರೆಯಲಿ ನಿನ್ನ ಮುದ್ದು ಮುಖವ
ದೊಡ್ಡ ಹಣೆಯಲೊಂದು  ಕುಂಕುಮದ  ಬೊಟ್ಟು
ಬೈತಲೆ  ಮಧ್ಯ ಮೆರುಗುವ ಸಿಂಧೂರ
ಕೊರಳಲಿ ನಾ ಕಟ್ಟಿದ ಕರಿಮಣಿ ಮಾಲೆ
ಕೇಶಕ್ಕೆ  ಮಲ್ಲಿಗೆ ಹೂವಿನ ಘಮ ಘಮ ಅಲಂಕಾರ
ಕೈತುಂಬಾ  ಗಿಣಿ ಗಿಣಿ ಕುಪ್ಪಿ ಬಳೆಗಳು
ನೀ ಉಟ್ಟ ಹಸಿರು ಬಣ್ಣದ ಆ ಸೀರೆ
ಜ್ಜಲ್ ಜ್ಜಲ್ ಎನ್ನುವ ನಿನ್ನ ಕಾಲ್ಗೆಜ್ಜೆ
ಕಾಲ್ಬೆರಳಲ್ಲಿ ಮಿನುಗುವ ಬೆಳ್ಳಿಯುನ್ಗುರ
ಕನಸಲ್ಲೇ ಬಂದೊಮ್ಮೆ ನೀ ಮಾತನಾಡದೇ
ಒಂದು ಮುಗುಳ್ನಗುವನ್ನೂ ಕೊಡದೆ
ತಲೆ ತಿರುಗಿಸಿ ಹೋದೆಯಲ್ಲಾ
ಹೇಗೆ ಸಹಿಸಲಿ ನಾನು
ಹೇಗೆ ಸಾಂತ್ವನ ಮಾಡಲಿ ನನ್ನ ಮನಸನ್ನು


ಮಂಗಳವಾರ, ಜುಲೈ 3, 2012