ಶನಿವಾರ, ಮೇ 26, 2012

ಯಾಕೋ ಹಾಗೇನೇ...

ನಿನ್ನ ನೆನೆಯದ ದಿನಗಳು
ನೀನಿಲ್ಲದ ಜೀವನ 
ನನ್ನದಲ್ಲದ ಬದುಕು 
ಜೀವ ಹೋದ ಆ ಕ್ಷಣ 

ನಿನ್ನ ಮಿಂಚಿನ ಸಿಟ್ಟು 
ಗುಡುಗಿನ ಜಗಳ 
ಮಳೆ ನೀರಲ್ಲಿ -
 -ಕೊಚ್ಚಿ ಹೋಯಿತು 
ಈಗ ಉಳಿದದ್ದು 
ಮಣ್ಣಿನ  ಗಂಧ 
ಇಳೆಯ ತಂಪು
ನಿನ್ನ ಮಧುರ ಮಾತು 

  

ಮಂಗಳವಾರ, ಮೇ 1, 2012

ಕಂದ ನಾಗುವುದು ನಮಗೆ

ಅಪ್ಪ ನಾಗುವೇನು ನಾನು
ತಾಯಿ ವಾಗುವಳು ಮಡದಿ
ಕಂದ ನಾಗುವುದು ನಮಗೆ .

ಅಜ್ಜ ನಾಗುವವನು ಅಪ್ಪ
ಅಜ್ಜಿ ಯಾಗುವಳು ಅಮ್ಮ
ಮೊಮ್ಮಗು ಬರುವುದು ನಮ್ಮನೆಗೆ.

ಚಿಕ್ಕಪ್ಪ  ನಾಗುವವನು ತಮ್ಮ
ಅತ್ತೆ  ಯಾಗುವವಳು ತಂಗಿ
ಮಗು ಬರುವುದು ನಮ್ಮ ಕುಟುಂಬಕ್ಕೆ