ಬುಧವಾರ, ಜುಲೈ 11, 2012

ಹೇಗೆ ಮರೆಯಲಿ

ಹೇಗೆ ಮರೆಯಲಿ ನಿನ್ನ ಮುದ್ದು ಮುಖವ
ದೊಡ್ಡ ಹಣೆಯಲೊಂದು  ಕುಂಕುಮದ  ಬೊಟ್ಟು
ಬೈತಲೆ  ಮಧ್ಯ ಮೆರುಗುವ ಸಿಂಧೂರ
ಕೊರಳಲಿ ನಾ ಕಟ್ಟಿದ ಕರಿಮಣಿ ಮಾಲೆ
ಕೇಶಕ್ಕೆ  ಮಲ್ಲಿಗೆ ಹೂವಿನ ಘಮ ಘಮ ಅಲಂಕಾರ
ಕೈತುಂಬಾ  ಗಿಣಿ ಗಿಣಿ ಕುಪ್ಪಿ ಬಳೆಗಳು
ನೀ ಉಟ್ಟ ಹಸಿರು ಬಣ್ಣದ ಆ ಸೀರೆ
ಜ್ಜಲ್ ಜ್ಜಲ್ ಎನ್ನುವ ನಿನ್ನ ಕಾಲ್ಗೆಜ್ಜೆ
ಕಾಲ್ಬೆರಳಲ್ಲಿ ಮಿನುಗುವ ಬೆಳ್ಳಿಯುನ್ಗುರ
ಕನಸಲ್ಲೇ ಬಂದೊಮ್ಮೆ ನೀ ಮಾತನಾಡದೇ
ಒಂದು ಮುಗುಳ್ನಗುವನ್ನೂ ಕೊಡದೆ
ತಲೆ ತಿರುಗಿಸಿ ಹೋದೆಯಲ್ಲಾ
ಹೇಗೆ ಸಹಿಸಲಿ ನಾನು
ಹೇಗೆ ಸಾಂತ್ವನ ಮಾಡಲಿ ನನ್ನ ಮನಸನ್ನು


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ