ಶನಿವಾರ, ಆಗಸ್ಟ್ 25, 2012

ಮುಳುಗುವನು..

ಸುಡು  ಬಿಸಿಲು ಕಳೆಯಿತು
ಪ್ರತಾಪ ಕಾಲ ಮುಗಿಯಿತು
ಬೆಂದು ಬಾಡಿದವರೆಷ್ಟು
ಸುಟ್ಟು ಕರಚಿದವರೆಷ್ಟು

ಮುಳುಗುತಿರುವನು ಪಶ್ಚಿಮದಲ್ಲಿ
ಅರಬಿ ಸಮುದ್ರದ ಶಾಂತತೆಯಲ್ಲಿ
ತಣ್ಣಗೆ ಮೆಲ್ಲಗೆ ಮಾತಿಲ್ಲದೆ..
ತೀಕ್ಷ್ಣತೆಯ ಪರಿವಿಲ್ಲದೆ

ರವಿಯು ಮುಳುಗಿದರೇನು
ಚಂದ್ರನುದಯಿಸದರೇನು
ಬದುಕು ಇನ್ನೂ ಬಾಕಿ
ಮರುಭೂಮಿಯಲ್ಲಿ



ಬುಧವಾರ, ಆಗಸ್ಟ್ 22, 2012

ವರುಷ ಅರ್ಧ ಕಳೆಯಿತು

ಅರೇ ... ವರುಷ ಅರ್ಧ ಕಳೆಯಿತು ನನ್ನ ಮರುಭೂಮಿ ಬದುಕು  ಎಂಬ ಏಕಾಂತ ಬ್ಲಾಗಿಗೆ..,
 ಹೌದು ಇದು ನನ್ನ  ಏಕಾಂತ ಬ್ಲಾಗ್ .
ನಾನಿಲ್ಲಿ  ಬರೆದದ್ದೇ  ಬರಹ , ಗೀಚಿದ್ದೇ ಕವನ..,  ಅದು ಓದಿದಾಗ ಹುಟ್ಟಿದ್ದೇ  ಹಾಸ್ಯ
ತಿದ್ದಲ್ಲೂ  ತೀಡಲ್ಲು ಯಾರು ಇಲ್ಲ .., ಒಬ್ಬನ್ನೇ ಒಬ್ಬ ಬ್ಲಾಗ್ follower ಇಲ್ಲ .., ಅಂದ ಮೇಲೆ ಪ್ರೋತ್ಸಾಹದ ಮಾತೆಲ್ಲಿ, ಕಮೆಂಟ್ ಉಳಿಯಿತು ದೂರದಲ್ಲಿ, ಪ್ರಿಯ ಮಡದಿಯನ್ನು  ಬಿಟ್ಟು ಬೇರೆ ಓದುಗರೇ ಇಲ್ಲ....

ಮತ್ತೆ ಬರೆಯುವೆನು ನಾನು.., ಬರೆಯಲು ಹಿತವಿರುವತನಕ.., ಇದು ನನ್ನ ಜೀವದ ಗೆಳೆಯ ನೀನಿಲ್ಲದಿದ್ದರೆ ನನಗೆ ಬದುಕು ಮರುಭೂಮಿಯಲ್ಲಿ  ಏಕಾಂತ...

ಬೆನ್ನು ತಟ್ಟುವರಿಲ್ಲ ಎಂಬ ದುಃಖವಿಲ್ಲ .., ಕಮೆಂಟ್ ಇಲ್ಲೆಂಬ ಬೇಸರವಿಲ್ಲ..., ಓದುಗರಿಲ್ಲೆಂಬ ಚಿಂತೆ ನನಗಿಲ್ಲ.

ನನ್ನ ಬರಹ  ಇಷ್ಟವಿಲ್ಲದಿದ್ದರೆ ನನಗೆ ಅಷ್ಟೇ  .., ಯಾರ ಮನಸು ನೋಯದಿದ್ದರೆ ಅದು ಸಾಕು ನನಗೆ..
  

  

ಮಂಗಳವಾರ, ಆಗಸ್ಟ್ 21, 2012

ಮನಸ್ಸು ನಕ್ಕಿತು ಪಾದ ನೋಡಿ

ನಡೆದಾಡುವೇನು ನಾನು
 ಬರೀ ಕಾಲಲ್ಲೇ ಈ ಮರುಳುಗಾಡಲ್ಲಿ

ಗುಳ್ಳೆ ಎದ್ದ ಪಾದಗಳನೋವೇನು
ನೀನು ನನಗೆ ಕೊಟ್ಟ ನೋವಿಗೆ

ಮನಸ್ಸು ನಕ್ಕಿತು ಪಾದ ನೋಡಿ


ಗುರುವಾರ, ಆಗಸ್ಟ್ 16, 2012

ಕಾಮನ ಬಿಲ್ಲು

ಸುಂದರ ಕಾಮನ ಬಿಲ್ಲಿಗಿದೆ ಏಳು ಬಣ್ಣ
ಇದನ್ನು ಮುಟ್ಟುವುದು ನಮ್ಮಾಸೆ
ಇದು ಕೊಡುವುದು ಬರೀ ಕನಸೇ

ಸುಂದರಿ ಸ್ತ್ರೀಯಲ್ಲೂ ಇದೆ ಏಳು ಗುಣ
ಗೆಳೆಯಾ ಇದನ್ನು ಮಾತ್ರ ಬದಿಗಿರಿಸು
ಇದು ಕೊಡುವುದು ಬರೀ ನಿರಾಸೆ

ಸೋಮವಾರ, ಆಗಸ್ಟ್ 13, 2012

ಗಂಡನ ಹೆಸರು..

  ಕೆಲಸ ಮುಗಿಸಿ ಬಂದು ಊಟ ಮಾಡಿ ರಾತ್ರಿ ಅದೇನೋ ಆಲೋಚನೆ  ಮಾಡುತ್ತಾ ಮಲಗಿದ್ದೆ
ಇದ್ದಕಿದ್ದಂತೆ ನನ್ನ ಹೆಸರು ನನಗೆ ಮರೆತೇ ಹೋಯಿತು ನಂಬಿ ಬಿಡಿ ಮಾರಾಯ್ರೆ ಅದೆಷ್ಟು ಆಲೋಚನೆ ಮಾಡಿದರು
ಹೆಸರು ಹೊಳೆಯುತಲೇ ಇಲ್ಲ .. ತಲೆ ಚಿಟ್ಟು ಹಿಡಿಯುವ ಮುನ್ನ ಅರ್ಧಾಂಗಿಯನ್ನೇ ಕೇಳುವ ಅನಿಸಿತು .

ಮೊಬೈಲ್ ಫೋನ್ ತೆಗೆದು ಮಡದಿಗೆ ಫೋನ್ ಹಾಯ್ಸಿದೆ ....

" ಹಲೋ.. " ಎಂದಳು ನಿದ್ದೆ ಮಂಪರಿನಲ್ಲಿ

"ಲೇ ಮಾರಾಯ್ತಿ ನನ್ನ ಹೆಸರು ಮರೆತೋಯ್ತು ಕಣೇ ಒಮ್ಮೆ ನೆನಪಿಸಿ ಬಿಡೋ"

"ಇದೇನು ಖಾಯಿಲೆ ನಿಮಗೆ ಮಧ್ಯರಾತ್ರಿ ಕರೆದು..."

"ಖಾಯಿಲೆ ಗೀಯಿಲೆ ಏನು ಇಲ್ಲ.., ಅದೇನೋ ಜ್ಞಾಪಕಕ್ಕೆ ಬರುವುದಿಲ್ಲ ಅದಕ್ಕೆ ಕೇಳಿದೆ "

" ಅಯ್ಯೋ ಕೃಷ್ಣಾ ಅದ್ಹೇಗೆ ಹೇಳಲಿ ನಿಮ್ಮ ಹೆಸರು"

"ಅದರಲ್ಲೇನಿದೆ ಒಮ್ಮೆ ಹೇಳಿ ಬಿಡು ಕಾಣೆ "

"ಅಯ್ಯ್ಯೋ ಪರಮೇಶ್ವರಾ ನಿಮಗೇನು ತಲೆ ಸರಿ ಇಲ್ವಾ ನಿಮ್ಮ ಹೆಸರು ನಾನೆಗೆ ಹೇಳಲಿ"

"ಅದೇ ಮಾರಾಯ್ತಿ ಹೇಳಿದನಲ್ವೆ  ಜ್ಞಾಪಕಕ್ಕೆ ಬರುವುದಿಲ್ಲ ಎಂದು"  

"ರಾಮ ರಾಮ ನನಗೆ ನಿಮ್ಮ ಹೆಸರು ಹೇಳಲು ಸಾಧ್ಯವಿಲ್ಲ ...ಮಾರಾಯ್ರೆ "

"ಹೇ.. ತಲೆ ಹರಟೆ ಮಾಡದೆ ಒಮ್ಮೆ ಹೇಳಿಬಿಡು ಕಾಣೇ" 

"ಶಿವ ಶಿವ ..ಮಧ್ಯ ರಾತ್ರಿ ಕರೆದು ನನ್ನ ನಿದ್ದೆ ಕೆಡಿಸಿ ಹಾಳಾಗಿ ಹೋಗಲು ನನ್ನ ಕೈಲಿ ಆಗೊಲ್ಲ ನಿಮ್ಮ ಹೆಸರು ಹೇಳಲು"

"...."

..."..."

ಈ ರೀತಿ ನಡೆಯಿತು  ನಮ್ಮ ವಾದ ಪ್ರತಿವಾದ  ರಾತ್ರಿಯೆಲ್ಲ,  ಇಲ್ಲಿ ನನಗೆ ಅರ್ಥವಾಗದ ಮಾತು ಏನಂದ್ರೆ....

    ನಾವು ಆರಾಧಿಸುವ , ಪ್ರಾರ್ಥಿಸುವ ದೇವರ ಹೆಸರನ್ನು ಏಕವಚನದಲ್ಲಿ ಕರೆಯುವ; ನಿಮಗೆ ತಲೆ ಸರಿಯಿಲ್ಲ.., ಹಾಳಾಗಿ ಹೋಗಿ ಎಂದು ದಿನಾ  ಜಗಳಕಾಯುವ ಈ  ಹೆಂಡತಿಯರಿಗೆ ಮಾತ್ರ   ಗಂಡನ ಹೆಸರು ಯಾಕೆ ಕರೆಯೋಕ್ಕೆ   ಆಗೋಲ್ಲ ...?



ಭಾನುವಾರ, ಆಗಸ್ಟ್ 5, 2012

ನಿದ್ದೆ..

ಪುಸ್ತಕ ತೆರೆದರೆ ಬರುತ್ತೆ
ಮುಚ್ಚಿದರೆ ದೂರ  ಹೋಗುತ್ತೆ ...

ನಿದ್ದೆ ಇಲ್ಲ ಎಂದೆ ಹೆಂಡತಿಯಲ್ಲಿ
ಪುಸ್ತಕ ಬಿಡಿಸು ಅಂದಳು ನಲ್ಲೆ

ಮರುಭೂಮಿ ಏಕಾಂತ..
..ಬದುಕಿಗೆ ಆಸರೆ ನಿದ್ದೆ  


ಸೋಮವಾರ, ಜುಲೈ 30, 2012

ಯಾರು ಸರಿ

ಅಬಲೆ ಮಹಿಳೆಯನ್ನು  ಹೊಡೆಯುವುದು ದುಶ್ಶಾಸನರೇ..
ತುಂಡು ಬಟ್ಟೆ ಧರಿಸಿ ಮದ್ಯ ಲಹರಿಯಲ್ಲಿ ಮುಳುಗಲು ಹೋದವರಾರು ದ್ರೌಪದಿಯರೇ..? 

ನಿಮ್ಮ ಸಹೋದರಿಯನ್ನು ಈ ಥರಾ ಎಳೆದಾಡಿದರೆ ಸಹಿಸುತೀರಾ ನೀಚರೇ
ಮಕ್ಕಳನ್ನು ಮದ್ಯ ಪಾರ್ಟಿಗೆ ಅರಿತು ಕಳುಹಿಸುವ ನಿನ್ನನ್ನು "ಅಮ್ಮ" ಎಂದು ಹೇಗೆ ಕರೆಯಲಿ ?